ಭಾನುವಾರ, ಮಾರ್ಚ್ 17, 2013

ತರಕಾರಿ


ಬೇಕೆ ಬೇಕೆ ತರಕಾರಿ
                ಥರ ಥರ ಜಾತಿಯ ತರಕಾರಿ
ಬೆರಳನು ಹೋಲುವ ಪಡವಲಕಾಯಿ
                ಖಾರ ಖಾರ ಮೆಣಸಿನಕಾಯಿ
ಬಜ್ಜಿಗೆ ಹಾಕೋ ಬಾಳೇಕಾಯಿ
                ಅಜ್ಜಿಗೆ ಪ್ರಾಣ ಹಾಗಲಕಾಯಿ
ಬೇಕೆ ಬೇಕೆ ತರಕಾರಿ
                   ಥರ ಥರ ಜಾತಿಯ ತರಕಾರಿ

ಬುಧವಾರ, ಮಾರ್ಚ್ 6, 2013

ರವಿ ಬಂದ ರವಿ




ರವಿ ಬಂದ ರವಿ
     ರವೆ ಸ್ವಲ್ಪ ಉರಿ
ಮೆಣಸಿನಕಾಯಿ ಮುರಿ
     ಸ್ವಲ್ಪ ಕಾಯಿ ತುರಿ
ಉಪ್ಪಿಟ್ಟಾದ್ಮೇಲ್
     ನನ್ನ ಕರಿ

ಸೋಮವಾರ, ಮಾರ್ಚ್ 4, 2013

ಒಂದರಿಂದ ಹತ್ತು

ಒಂದು ಎರಡು
     ಬೇಸನ್ ಲಾಡು
ಮೂರು ನಾಲ್ಕು
     ಮೈಸೂರ್‍ ಪಾಕು
ಐದು ಆರು
     ಬಾದಾಮಿ ಕೀರು
ಏಳು ಎಂಟು
     ಪೆಪ್ಪರ್‌ಮೆಂಟು
ಒಂಭತ್ತು ಹತ್ತು
     ಗರಿಗರಿ ಬಿಸ್ಕತ್ತು
 

ಕಣ್ಮಣಿ Copyright © 2011 Designed by Ipietoon Blogger Template and web hosting